Become a Member of RMKS
ರೈನ್ ಮೈನ್ ಕನ್ನಡ ಸಂಘ ಕಳೆದ ಶನಿವಾರ, ದಿನಾಂಕ 24-02-2024 ರಂದು ಮೊಟ್ಟ ಮೊದಲ ಬಾರಿಗೆ
ಕನ್ನಡ ಕಲಿ ವತಿಯಿಂದ ಶಿಕ್ಷಕಿ/ಶಿಕ್ಷಕರು ವಿದ್ಯಾರ್ಥಿ /ನಿಯರು ಮತ್ತು ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಿಕ್ಷಕಿ/ಶಿಕ್ಷಕರನ್ನು ಮುಖಃತಹ ಭೇಟಿ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಅವಕಾಶ ಈ ಕಾರ್ಯಕ್ರಮದಿಂದ ದೊರಕಿತು ಎಂದು ತಿಳಿಸಲು ನಮ್ಮ ರೈನ್ ಮೈನ್ ಕನ್ನಡ ಸಂಘ ಹರ್ಷಿಸುತ್ತದೆ.
ಪುಟಾಣಿ ಮಕ್ಕಳು ಕನ್ನಡ ಬಾವುಟ ಚಿತ್ರಿಸಿ-ಬಣ್ಣಹಚ್ಚುವುದು, ಬಾಲ್ಯದಿನದ ಆಟಗಳಾದ ಕೆರೆ-ದಡ ಹಾಗೂ ಇನ್ನಿತರ ಆಟಗಳಿಂದ ಮಕ್ಕಳು ತಮ್ಮ ಶಿಕ್ಷಕಿ/ಶಿಕ್ಷಕರನ್ನು ಅರಿತು ಬೆರೆಯುವುದಕ್ಕೆ ಸಹಕಾರಿಯಾಯಿತು.
ಪೋಷಕರು ಸಹ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಸಲಹೆ-ಸೂಚನೆಯನ್ನಿತ್ತು, ಕನ್ನಡ ಕಲಿ ಬಳಗವನ್ನು ಹುರಿದುಂಬಿಸಿದರು. ತದನಂತರ ಮಕ್ಕಳಿಗೆ ಕನ್ನಡ ಕಥೆ ಪುಸ್ತಕ ಗಳನ್ನು ವಿತರಿಸಲಾಯಿತು.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🎉